📅 12 September 2026🕐 09:23 AM

ದೇವಸ್ಥಾನ ಯೋಜನೆ

ಒಂದು ದೇವಸ್ಥಾನ — ಒಂದು ಸಮಗ್ರ ಸಮಾಜಮುಖಿ ಕೇಂದ್ರ

ನಾವು ರೂಪಿಸಿಕೊಳ್ಳುತ್ತಿರುವ ದೇವಸ್ಥಾನದ ಪರಿಕಲ್ಪನೆ ಕೇವಲ ಒಂದು ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗಿಲ್ಲ.

ಧಾರ್ಮಿಕ ಆಚರಣೆಗಳ ಜೊತೆಗೆ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಸೇವಾ ಚಟುವಟಿಕೆಗಳನ್ನು ಒಳಗೊಂಡ ಸಮಗ್ರ ದೇವಸ್ಥಾನ ಸಮುಚ್ಚಯ ನಿರ್ಮಿಸುವುದು ಈ ಯೋಜನೆಯ ಉದ್ದೇಶ.

ಯೋಜನೆಯ ಮೂಲ ಪರಿಕಲ್ಪನೆಯಲ್ಲಿ ದೇವಸ್ಥಾನವನ್ನು ಸಮಾಜದ ಐದು ಪ್ರಮುಖ ಆಯಾಮಗಳ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಚಿಂತನೆ ಇದೆ.

ಯೋಜನೆಯ ಪ್ರಮುಖ ಅಂಶಗಳು

• ದೇವಾಲಯ ಮತ್ತು ಆಧ್ಯಾತ್ಮಿಕ ಕೇಂದ್ರ
ನಿತ್ಯ ಪೂಜೆ, ವಿಶೇಷ ಆರಾಧನೆ, ಉತ್ಸವಗಳು, ಭಜನೆ ಮತ್ತು ಸತ್ಸಂಗ.

• ಸಾಂಸ್ಕೃತಿಕ ಕೇಂದ್ರ
ಸಂಗೀತ, ನೃತ್ಯ, ಯಕ್ಷಗಾನ, ನಾಟಕ, ಜಾನಪದ ಕಲೆ ಮತ್ತು ಸ್ಥಳೀಯ ಕಲಾವಿದರಿಗೆ ವೇದಿಕೆ.

• ಶಿಕ್ಷಣ ಕೇಂದ್ರ
ಗ್ರಂಥಾಲಯ, ಮಕ್ಕಳಿಗೆ ಪೂರಕ ಶಿಕ್ಷಣ, ಸಂಸ್ಕಾರ ಶಿಕ್ಷಣ, ಶ್ಲೋಕ ಮತ್ತು ಭಾರತೀಯ ಜ್ಞಾನ ಪರಂಪರೆಯ ಪರಿಚಯ.

• ಸಾಮಾಜಿಕ ಕೇಂದ್ರ
ಸಾಮರಸ್ಯ, ಸಾಮೂಹಿಕ ಕಾರ್ಯಕ್ರಮಗಳು, ಕುಟುಂಬ ಸಲಹೆ ಮತ್ತು ಸಮಾಜಮುಖಿ ಚಟುವಟಿಕೆಗಳು.

• ಸೇವಾ ಕೇಂದ್ರ
ಆರೋಗ್ಯ ಶಿಬಿರ, ಅನ್ನದಾಸೋಹ, ರಕ್ತದಾನ, ವಿಪತ್ತು ಸಂದರ್ಭದಲ್ಲಿ ನೆರವು ಮತ್ತು ಅಗತ್ಯವಿರುವವರಿಗೆ ಸಹಾಯ.

ಈ ಐದು ಆಯಾಮಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದಾಗ ದೇವಸ್ಥಾನವು ನಿಜವಾದ ಅರ್ಥದಲ್ಲಿ “ಜನೋಪಯೋಗಿ ದೇವಸ್ಥಾನ” ವಾಗಿ ಬೆಳೆಯುತ್ತದೆ.

ಪ್ರಕೃತಿಯೊಂದಿಗೆ ಸಾಮರಸ್ಯ

ನಮ್ಮ ದೇವಸ್ಥಾನವು ಆಧ್ಯಾತ್ಮಿಕತೆಯ ಜೊತೆಗೆ ಪರಿಸರ ಜವಾಬ್ದಾರಿಯನ್ನೂ ಪ್ರತಿಬಿಂಬಿಸಬೇಕು ಎಂಬುದು ಯೋಜನೆಯ ಆಶಯ.

Green Temple ಪರಿಕಲ್ಪನೆಯಡಿ:

  • ನೈಸರ್ಗಿಕ ಮತ್ತು ಸ್ಥಳೀಯ ನಿರ್ಮಾಣ ಸಾಮಗ್ರಿಗಳ ಬಳಕೆ
  • ನೈಸರ್ಗಿಕ ಗಾಳಿ ಮತ್ತು ಬೆಳಕಿಗೆ ಆದ್ಯತೆ
  • ಮಳೆನೀರು ಕೊಯ್ಲು
  • ಸೌರಶಕ್ತಿ ಬಳಕೆ
  • ತ್ಯಾಜ್ಯ ನಿರ್ವಹಣೆ
  • ಹೂವಿನ ತ್ಯಾಜ್ಯದಿಂದ ಸಾವಯವ ಗೊಬ್ಬರ/ಉಪಯುಕ್ತ ಉತ್ಪನ್ನಗಳ ತಯಾರಿ
  • ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕ್ರಮಗಳು

ಇವುಗಳ ಮೂಲಕ ದೇವಸ್ಥಾನವನ್ನು ಪರಿಸರ ಸ್ನೇಹಿ ಮತ್ತು ಸ್ವಾವಲಂಬಿ ಕೇಂದ್ರವಾಗಿ ರೂಪಿಸುವ ಚಿಂತನೆ ಇದೆ.